ಸುಮಾರು ೧೪೦೦ ವರ್ಷಗಳ ಹಿಂದೆ, ಅಂದರೆ ೭ನೇ ಶತಮಾನದ ಆದಿಯಲ್ಲಿ ಭಗವಾನ್ ಶಿವನೇ ಆದಿಗುರು ಶ್ರೀ ಶಂಕರಾಚಾರ್ಯ ಭಗವಾತ್ಪಾದರಾಗಿ ಅವತರಿಸಿ, ಸನಾತನ ಧರ್ಮದ ಏಳಿಗೆಗಾಗಿ ಧರ್ಮದ ಮೂಲ ತತ್ವಗಳನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ತೊಡಗಿ ಅನೇಕ ಸೂತ್ರಗಳನ್ನು, ಭಾಷ್ಯ ಗಳನ್ನು, ರಚಿಸಿ, ಸಂಪೂರ್ಣ ಭಾರತದ ನಾಲ್ಕೂ ದಿಕ್ಕಿನಲ್ಲಿ ಸಂಚರಿಸಿ ಮಹತ್ಕಾರ್ಯದಲ್ಲಿ ತೊಡಗಿದ್ದರು. ಇದೇ ನಿಟ್ಟಿನಲ್ಲಿ ಸಮಸ್ತ ಹಿಂದೂ ಜನಾಂಗಕ್ಕೆ ಹಿತವಾಗುವ ದೃಷ್ಟಿಯಲ್ಲಿ,
ಶ್ರೀ ಗಳು "ಪಂಚಾಯತನ ಪೂಜಾ" ಕ್ರಮವನ್ನು ಬಹಳ ವಿಸ್ತಾರವಾಗಿ ಪ್ರಸ್ತಾವಿಸಿರುತ್ತಾರೆ. ಇಂತಹ ಪೂಜಾ ಕ್ರಮಗಳು ಪ್ರತಿಯೊಬ್ಬರ ಮನೆಗಳಲ್ಲಿಯೂ ನಡೆದಾಗಲೇ ಸಂಪೂರ್ಣ ಬೆಳವಣಿಗೆ ಮತ್ತು ಅಭಿವೃದ್ದಿ ಕಾಣಬಹುದು. ಆದರೆ ಶ್ರೀ ಗಳು ಬಹಳ ಮೊದಲೇ ಮನಗಂಡಂತೆ ಕಲಿಯುಗದಲ್ಲಿ, ಈ ರೀತಿಯ ಪೂಜಾ ಕೈಂಕರ್ಯ ಗಳನ್ನು ಮಾಡಲು ಅನುಕೂಲಗಳು ದೊರಕದಿರುವ ಸಂಧರ್ಭವನ್ನು ಅವರು ಗ್ರಹಿಸಿದ್ದರು. ಹಾಗಾಗಿ ಈ ರೀತಿಯ ಪೂಜೆಗಳನ್ನು ಪ್ರತಿಯೊಬ್ಬರೂ ನಡೆಸುವಲ್ಲಿ ಅನುಕೂಲಕ್ಕೋಸ್ಕರ ಆದಿ ಗುರು ಶ್ರೀ ಶಂಕರರಚಾರ್ಯ ಭಗವತ್ಪಾದರು "ಪಂಚಾಯತನ ದೇವತಾ ಸನ್ನಿಧಿಯ ನ್ನು ರಚಿಸಲು ಎಲ್ಲ ರೀತಿಯ ವಿಸ್ತಾರವಾಗಿ ಪರಿಚಯಿಸಿದ್ದರು.
ಆದಿಗುರು ಶ್ರೀ ಶಂಕರಾಚರ್ಯ ಭಗವತ್ಪಾದರ ಪ್ರತಿಪಾದನೆಯಂತೆ ಸುಮಾರು 1400 ವರ್ಷಗಳ ನಂತರ ಈಗ "ಲೋಕಾಃ ಸಮಸ್ತಾಃ ಸುಖಿನೋ ಭವಂತು" ಎಂಬ ಮೂಲ ತತ್ವವನ್ನು ಆಧಾರಿಸಿ ಮಾನವನ ಲೌಕಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಸುಧಾರಿಸಲು ಈ ಪ್ರಸನ್ನ ಚಂದ್ರಶೇಖರ ಆಶ್ರಮದ ಆವರಣದಲ್ಲಿ ಮಹತ್ತರ ಸ್ವಯಂ ಪ್ರೇರಿತ ದಾನಿಗಳ
ಸಹಾಯ ಹಸ್ತ ದಿಂದ ಶ್ರೀ ಶಿವಪಂಚಾಯತನ ದೇವತಾ ಸನ್ನಿಧಿ ಯನ್ನು 1-4-2009 ರ ಚೈತ್ರ ಮಾಸದಲ್ಲಿ, "ಧರ್ಮಸ್ತ್ವಂ ವೃಷಭ ರೂಪೇಣ" - ಧರ್ಮದ ರೂಪ ವೃಷಭ ( ಎತ್ತು) - ಎಂಬಂತೆ ನಿರ್ಮಾಣ ಮಾಡಲಾಗಿದೆ..
ವಿಶೇಷ ವಾಗಿ ಇಲ್ಲಿ "ವೇಸರ" ಪದ್ದತಿಯ ರೀತಿಯಲ್ಲಿ ಈ ಸಂಪೂರ್ಣ ದೇವಾಲಯಗಳು ನಿರ್ಮಿತವಾಗಿರುವುದು. ಪ್ರತಿಯೊಂದು ದೇವರಿಗೂ ಪ್ರತ್ಯೇಕ ಗರ್ಭಗುಡಿ ಇದ್ದು, ಈ ಗರ್ಭಗುಡಿಯು ಮಾನವನ ಶರೀರದ ಪ್ರಾಕಾರವನ್ನೇ ಹೊಂದಿರುತ್ತದೆ.
ಅಂತಹ ವಿಶೇಷ - ವೇಸರ - ಪದ್ದತಿಯಲ್ಲಿ ರಚಿಸಲಾಗಿರುವ ಈ ಶಿವಪಂಚಾಯತನ ದೇವತಾ ಸನ್ನಿಧಿಯಲ್ಲಿ ಕ್ರಮವಾಗಿ ಶ್ರೀ ಸೂರ್ಯ, ಗಣಪತಿ, ಅಂಬಿಕೆ, ವಿಷ್ಣು ಹಾಗೂ ಶಿವ ದೇವತೆಗಳ ಮೊಲ ವಿಗ್ರಹಗಳನ್ನು ಸ್ಥಾಪಿಸಲಾಗಿದೆ.
ಈ ಪಂಚ ದೇವತೆಗಳು ಪಂಚ ಮೂಲ ತತ್ವಗಳನ್ನೇ ಪ್ರತಿಪಾದಿಸುತ್ತವೆ. ಕ್ರಮವಾಗಿ - ಸೂರ್ಯದೇವತೆ ಯು ವಾಯುವನ್ನೂ, ಗಣಪತಿ - ಅಗ್ನಿಯನ್ನೂ ದೇವಿ - ಜಲವನ್ನೂ, ವಿಷ್ಣು - ಪ್ರಥ್ವಿಯನ್ನು ಹಾಗೂ ಶಿವನು - ಆಕಾಶ ವನ್ನು ಹೀಗೆ ಪಂಚ ತತ್ವಗಳನ್ನು ಪ್ರತಿಪಾದಿಸುತ್ತವೆ.
ಈ ರೀತಿಯಾಗಿ ಪಂಚ ದೇವತೆಗಳ ಆರಾಧನೆಯಿಂದ ಪಂಚಭೂತಗಳನ್ನು ಆರಾಧಿಸುವ ಅಖಂಡ ಪುಣ್ಯ ಲಭ್ಯವಾಗುತ್ತವೆ. ಇದಲ್ಲದೆ, ವೇದ ಪುರಾಣಗಳಲ್ಲಿ ವಿಸ್ತಾರವಾಗಿ ತಿಳಿಸಿರುವ ಹಾಗೆ ಈ ಪಂಚ ದೇವತೆಗಳ ಆರಾಧನೆಯಿಂದ, ಆರೋಗ್ಯ, ನಿರ್ವಿಘ್ನತೆ, ಐಶ್ವರ್ಯ ಜ್ಞಾನ ಮೋಕ್ಷ ಗಳು ಲಭಿಸುತ್ತವೆ. ಆರೋಗ್ಯಕ್ಕೇ ಅಧಿಪತಿಯಾಗಿ ಸೂರ್ಯ ದೇವರು, ನಿರ್ವಿಘ್ನತೆಗೆ ಅಧಿಪತಿಯಾಗಿ ಗಣಪತಿಯೂ, ಐಶ್ವರ್ಯಕ್ಕೆ ಅಧಿಪತಿಯಾಗಿ ದೇವಿಯೂ, ಜ್ಞಾನಕ್ಕೆ ಅಧಿಪತಿಯಾಗಿ ಶಿವನೂ, ಮೋಕ್ಷಕ್ಕೆ ಅಧಿಪತಿಯಾಗಿ ವಿಷ್ಣು ವೂ ಇಲ್ಲಿ ನೆಲೆಸಿ ಮಾನವನ ಸರ್ವತ್ರ ಏಳಿಗೆಯನ್ನು ಅನುಗ್ರಹಿಸುತ್ತಾರೆ.
ಈ ಪ್ರಸನ್ನ ಚಂದ್ರಶೇಖರ ಆಶ್ರಮದ ಆವರಣವನ್ನು ಸಂಪೂರ್ಣ ಪುಣ್ಯಕ್ಷೇತ್ರವಾಗಿ ಮಾರ್ಪಡಿಸಲು ಅಪಾರ ಜ್ಞಾನಿಗಳ ಮಾರ್ಗದರ್ಶನದಲ್ಲಿ ಆಶ್ರಮದ ಸಹೃದಯಿ ಭಕ್ತಾದಿ ದಾನಿಗಳು, ಸದಸ್ಯರು, ನಿರಂತರ ಶ್ರಮವಹಿಸಿ, ಇಲ್ಲಿ ಅನೇಕ ವ್ಯವಸ್ಥೆಗಳನ್ನು ಮಾಡಿರುತ್ತಾರೆ
ದೇವತಾ ಸನ್ನಿಧಿ, ಗೊಶಾಲೆ, ಅನ್ನಪೂರ್ಣೇಶ್ವರಿ ದಾಸೋಹ ಭವನ, ಪುಷ್ಕರಣಿ, ( ಕಲ್ಯಾಣಿ), ದೈವೀಕ ವನಗಳಾದ - ರಾಶಿ ವನ, ನಕ್ಷತ್ರ ವನ, ಸಪ್ತರ್ಷಿ ವನ, ನವಗ್ರಹ ವನ, ಆಯುರ್ವನ, ಯಾಗ ಶಾಲೆ, ಪ್ರಾರ್ಥನಾ ಮಂದಿರ, ಸಂಸೃತ ಪುಸ್ತಕಗಳ ಭಂಡಾರ, ಈ ಎಲ್ಲ ಸೌಕರ್ಯಗಳು ಇಲ್ಲಿ ಲಭ್ಯವಾಗಿರುತ್ತವೆ.
ಇಡೀ ಭಾರತದಲ್ಲೇ ಪ್ರಪ್ರಥಮವಾದ ವಿಶೇಷ, ವಿನೂತನ, ವೈಭವೋಪೇತ ವಾದ ಈ ಪುಣ್ಯಕ್ಷೇತ್ರಕ್ಕೆ ಬನ್ನಿ, ಕುಲದೇವತೆಗಳ ಅನುಗ್ರಹಕ್ಕೆ ಪಾತ್ರರಾಗಿ, ಆನಂದವನ್ನು ಹೊಂದಿ, ಸನಾತನ ಧರ್ಮದ ಪಾಲನೆಗೆ ಕೈ ಜೋಡಿಸಿ!!!